2024
EKYA/ December 27, 2024
‘ ಭಾಷೆ ‘ ಎಂಬ ಪದ ಪ್ರತಿಯೊಬ್ಬರಿಗೂ ತಿಳಿದ ಪದವಾಗಿದೆ. ವೈವಿದ್ಯತೆಯಲ್ಲಿ ಏಕತೆಯನ್ನುಕಾಣುವ ನಮ್ಮ ಭಾರತ ದೇಶದಲ್ಲಿ ಬಳಸುತ್ತಿರುವ ಅನೇಕಭಾಷೆಗಳಲ್ಲಿ ನಮ್ಮ ಕನ್ನಡ ಭಾಷೆ ಕೂಡ ಒಂದು . ಭಾಷೆ ಎಂಬುದು ದೇವರು ಮಾನವನಿಗೆ ಕಲ್ಪಿಸಿಕೊಟ್ಟ ಅಮೂಲ್ಯ ವರ ಎಂದು ಹೇಳಬಹುದು. ಭಾಷೆ ಇಲ್ಲದೇ ಈ ಜಗತ್ತನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ . ಪರಸ್ಪರ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಮತ್ತು ಸಂವಹನ ನಡೆಸಲು ಇರುವ ಏಕೈಕ ಮಾರ್ಗ ಎಂದರೆ ಭಾಷೆ. ಕರ್ನಾಟಕದಲ್ಲಿರುವ ಬಹಳ ಜನರಿಗೆ ಕನ್ನಡವು ಮಾತೃಭಾಷೆಯಾಗಿದೆ. ಕೆಲವು ರಾಜ್ಯಗಳಲ್ಲಿ ಕನ್ನಡ ಭಾಷೆಯನ್ನು ಮಾತೃ ಭಾಷೆಯನ್ನಾಗಿ ಬಳಸುವ ಜನರು ಕೂಡ ಇದ್ದಾರೆ. ಭಾಷೆಯ ಪ್ರಾರಂಭಿಕ ರೂಪಗಳಲ್ಲಿ ಹಳೆಗನ್ನಡ, ನಡುಗನ್ನಡ , ಹಾಗು ನಂತರದ ದಿನಗಳಲ್ಲಿ ಆಧುನಿಕ ಕನ್ನಡ ಆರಂಭವಾಯಿತು.ಆಧುನಿಕ ಭಾರತದಲ್ಲಿ ಪ್ರಚಲಿತವಾಗಿರುವ ಭಾಷೆಗಳಲ್ಲಿ ಕನ್ನಡ ಅತಿ ಹಳೆಯ ಭಾಷೆಯಾಗಿದೆ ಎಂದು ಸುಳಿವುದೊರಕಿದೆ. ದ್ರಾವಿಡ ಭಾಷೆಗಳ ಗುಂಪುಗಳಲ್ಲಿ ಕನ್ನಡವು ಒಂದು ಪ್ರಮುಖ ಭಾಷೆಯಾಗಿದೆ. ಭಾರತೀಯ ಭಾಷೆಗಳಿಗೆ ಮೂಲ ಲಿಪಿಯಾದ ‘ಬ್ರಾಹ್ಮೀ’ ಲಿಪಿಯಿಂದ ಕನ್ನಡ ಭಾಷೆಯು ಲಿಖಿತ ರೂಪಗಳನ್ನೂ ಪಡೆದುಕೊಂಡಿದೆ. ಕನ್ನಡ ಭಾಷೆಗೆ ೧೫೦೦ ವರ್ಷಗಳ ಹಿಂದಿನ ಚರಿತ್ರೆ ಇದೆ ಎಂದು ಹೇಳುತ್ತಾರೆ. ಕ್ರಿ,ಶ. ೪೫೦ (450 ) ಕ್ಕೆ ಸೇರಿದ ಹಲ್ಮಿಡಿ ಶಾಸನದಲ್ಲಿ ಕನ್ನಡ ಲಿಪಿಯನ್ನು ನೋಡಬಹುದು. ಕನ್ನಡ , ತಮಿಳು ಹಾಗೂ ತೆಲಗು ಭಾಷೆಗಳು ದ್ರಾವಿಡ ಭಾಷಾ ಗುಂಪಿಗೆ ಸೇರಿರುವುದರಿಂದ ಈ ಮೂರು ಭಾಷೆಗಳು ಒಂದೆ ರೀತಿಯ ರಚನೆಯನ್ನು ಹೊಂದಿದೆ. ಪ್ರಾಚೀನ ಸಾಹಿತ್ಯವನ್ನು ಹಳೆಗನ್ನಡದಲ್ಲಿ ನೋಡುತ್ತೇವೆ. ಕ್ರಿ . ಶ ಆರನೆಯ ಶತಮಾನದಿಂದ ಕನ್ನಡದಲ್ಲಿ ಕೆಲವು ರಾಜಾಜ್ಞೆಗಳನ್ನು ನೋಡಿದಾಗ ಪ್ರಾಕೃತ ಹಾಗು ಕನ್ನಡ ಭಾಷೆಗಳನ್ನು ಕರ್ನಾಟಕದ ಅರಸರು ಆಡಳಿತ ಉದ್ದೇಶಕ್ಕಾಗಿ ಕನ್ನಡವನ್ನು ಬಳಸುತ್ತಿದ್ದರು ಎಂದು ತಿಳಿದು ಬಂದಿದೆ. ವಿಜಯನಗರದ ಅರಸರು , ಮೈಸೂರಿನ ಒಡೆಯರ್ ರವರು ಕನ್ನಡವನ್ನು ರಾಜ್ಯದ ಏಕೈಕ ಭಾಷೆಯಾಗಿ ಬಳಸುತ್ತಿದ್ದರು. ಕರ್ನಾಟಕ ಸರ್ಕಾರವು ಕನ್ನಡವನ್ನು ಅಧಿಕೃತ ಆಡಳಿತ ಭಾಷೆಯನ್ನಾಗಿ ಮಾಡಿ ಅದನ್ನು ಬಳಸಲು ಹಾಗೂ ಅನುಷ್ಟಾನಕ್ಕೆ ತರಲು ಹಲವಾರು ಯೋಜನಾ ಕಾರ್ಯಗಳನ್ನು ಜಾರಿಗೆ ತಂದಿದೆ. ಸಾಹಿತ್ಯ ಕೃತಿಗಳಲ್ಲಿ ರಾಷ್ಟ್ರಕೂಟರ ರಾಜನಾದ ನೃಪತುಂಗನ ಆಸ್ಥಾನ ಕವಿಯಾದ ಶ್ರೀ ವಿಜಯನು ರಚಿಸಿರುವ ‘ಕವಿರಾಜ ಮಾರ್ಗವು’ ಕನ್ನಡ ಸಾಹಿತ್ಯದಲ್ಲಿ ಲಭ್ಯವಿರುವ ಪ್ರಥಮ ಕೃತಿಯಾಗಿದೆ. ಕನ್ನಡಲ್ಲಿ ಗದ್ಯ ಪದ್ಯಗಳನ್ನು ಬರೆದ ಗಂಗರಾಜನಾದ ದುರ್ವಿನೀತ , ನಾಗರ್ಜುನ ಮುಂತಾದ ಕವಿಗಳ ಹೆಸರುಗಳನ್ನು ಕವಿರಾಜ ಮಾರ್ಗ ಕೃತಿಯಲ್ಲಿ ತಿಳಿಸುತ್ತದೆ. ಕನ್ನಡ ಭಾಷೆಯ ಮೂರು ವಿಧಗಳಾದ ಹಳೆಗನ್ನಡ , ನಡುಗನ್ನಡ , ಆಧುನಿಕ ಕನ್ನಡ. ಇವುಗಳ ಪ್ರಸಿದ್ದ ಕವಿಗಳು ಎಂದರೆ ಹಳೆಗನ್ನಡದಲ್ಲಿ ರಚಿಸಿರುವರು ಪಂಪ , ರನ್ನ ಮತ್ತು ಪೊನ್ನ. ಜಾತ್ಯಾತೀತ ಹಾಗೂ ಧಾರ್ಮಿಕ ಮಹಾಕಾವ್ಯಗಳೆರಡನ್ನೂ ಬರೆದ ಮೊದಲಕವಿ ಪಂಪ. ಈತನ ಕೃತಿ ‘ಆದಿಪುರಾಣ’ ಒಂದು ಧಾರ್ಮಿಕ ಕೃತಿಯಾಗಿದೆ. ಮಹಾಭಾರತದ ಕಥನವಾದ ‘ವಿಕ್ರಮಾರ್ಜುನ ವಿಜಯ’, ರನ್ನನ ಗದಾಯುದ್ದ . ಪೊನ್ನನ ‘ಶಾಂತಿಪುರಾಣ’ ಹಳೆಗನ್ನಡ ಕಾಲದ ಮೇಲು ಕೃತಿಗಳಾಗಿವೆ. ಪಂಪಭಾರತ ನಂತರ ನಡುಗನ್ನಡ. ಇಲ್ಲಿ ಹೊಸ ಸಾಹಿತ್ಯಗಳು ಉಗಮವಾಯಿತು. ನಡುಗನ್ನಡ ಸಾಹಿತ್ಯದಲ್ಲಿ ಅನೇಕ ಹೊಸ ಸಾಹಿತ್ಯ ಪ್ರಕಾರದ ಕವಿಗಳೆಂದರೆ ಹರಿಹರ, ರಾಘವಾಂಕ . ಇವರು ತಮ್ಮದೇ ಶೈಲಿಯಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಉದಾಹರಣೆಗೆ ‘ಹರಿಶ್ಚಂದ್ರನ ಕಾವ್ಯ’. ನಂತರ ಅಲ್ಲಮ ಪ್ರಭು ಬಸವಣ್ಣ ಮತ್ತು ಅಕ್ಕ ಮಹಾದೇವಿಯವರ ವಚನಗಳು. ದಾಸ ಸಾಹಿತಿಗಳಲ್ಲಿ ಪುರಂದರದಾಸರು ಮತ್ತು ಕನಕದಾಸರುಗಳ ಅವಧಿಯಲ್ಲಿ ದಾಸ ಸಾಹಿತ್ಯ ಪ್ರಾರಂಭವಾಯಿತು. ಕುಮಾರವ್ಯಾಸರಂತಹ ಪ್ರಸಿದ್ದ ಕವಿಗಳು ಹುಟ್ಟಿಕೊಂಡರು ಇವರು ರಚಿಸಿರುವ ‘ಭಾಮಿನಿ ಷಟ್ಪದಿ’ಯು ಪ್ರಸಿದ್ದ ಕೃತಿಯಾಗಿದೆ. ನಂತರ ಆಧುನಿಕ ಕನ್ನಡ ೧೯ ನೇ ಶತಮಾನದಲ್ಲಿ ಉಗಮವಾಯಿತು. ಬಿ .ಎಂ. ಶ್ರೀ ದ. ರಾ ಬೇಂದ್ರೆ , ಶಿವರಾಮ ಕಾರಂತರು ಇಂತಹ ಪ್ರಸಿದ್ದ ಲೇಖಕರು ಜನಿಸಿದರು. ಇವರುಗಳು ಬರೆದಿರುವ ಹಲವಾರು ಕೃತಿಗಳು , ಕಾವ್ಯಗಳು , ನಾಟಕಗಳು ನಮ್ಮ ನಾಡಿನ ಭಾಷೆಯಾದ ಕನ್ನಡ ಭಾಷೆಯಲ್ಲಿ ರಚಿತವಾಗಿ ಕನ್ನಡ ಭಾಷೆಯ ಸೌಂದರ್ಯವನ್ನು ವರ್ಣಿಸಿವೆ. ಹಾಗೆ ಕನ್ನಡ ಸಾಹಿತ್ಯ ತಮ್ಮದೇ ಆದ ಕೊಡುಗೆಯನ್ನು ಕನ್ನಡ ನಾಡಿಗೆ ನೀಡಿದ್ದಾರೆ. ಕನ್ನಡ ಭಾಷೆಯಿಂದ ಅಮೂಲ್ಯವಾದ ನಮ್ಮ ಸಂಸ್ಕೃತಿಯ ಕಾಣುವ ಸಂಪತ್ತು ನಮ್ಮದಾಗಿದೆ. ಇದರಿಂದ ಕನ್ನಡ ಭಾಷೆಯ ಸೊಬಗು ಮತ್ತು ಅದರ ಮಹತ್ವವನ್ನು ನಾವೆಲ್ಲರೂ ಅರಿಯುತ್ತೇವೆ. Ms Bhagya, […]
EKYA/ December 27, 2024
Empowering Future Leaders: Digital Citizenship in the Best Schools in Bangalore Education goes beyond textbooks and exams—it’s about shaping students […]
EKYA/ December 26, 2024
Meta Title: IGCSE Education: Top Schools in Bangalore Guide 2025 Meta Description: Discover the 5 essential aspects of the IGCSE […]
EKYA/ December 26, 2024
In today’s fast-paced world, developing a growth mindset is essential for students. It transforms them into confident learners who continue […]
EKYA/ December 26, 2024
Are you worried that your child is getting distracted by social media? Read on to learn how to consciously use […]
EKYA/ December 26, 2024
The Indian Certificate of Secondary Education (ICSE) board is a private, non-governmental board dedicated to providing high-quality education. Its mission […]