#TeacherBlogger: ಕನ್ನಡ ಭಾಷೆಯ ಮಹತ್ವ (The Importance of Kannada)

‘ ಭಾಷೆ ‘ ಎಂಬ  ಪದ ಪ್ರತಿಯೊಬ್ಬರಿಗೂ ತಿಳಿದ ಪದವಾಗಿದೆ.  ವೈವಿದ್ಯತೆಯಲ್ಲಿ ಏಕತೆಯನ್ನುಕಾಣುವ  ನಮ್ಮ ಭಾರತ ದೇಶದಲ್ಲಿ ಬಳಸುತ್ತಿರುವ ಅನೇಕಭಾಷೆಗಳಲ್ಲಿ ನಮ್ಮ ಕನ್ನಡ ಭಾಷೆ ಕೂಡ ಒಂದು . ಭಾಷೆ  ಎಂಬುದು ದೇವರು ಮಾನವನಿಗೆ ಕಲ್ಪಿಸಿಕೊಟ್ಟ  ಅಮೂಲ್ಯ ವರ ಎಂದು ಹೇಳಬಹುದು.  ಭಾಷೆ ಇಲ್ಲದೇ ಈ ಜಗತ್ತನ್ನು ಊಹಿಸಿಕೊಳ್ಳಲು  ಸಾಧ್ಯವಿಲ್ಲ . ಪರಸ್ಪರ ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು  ಮತ್ತು ಸಂವಹನ ನಡೆಸಲು  ಇರುವ ಏಕೈಕ ಮಾರ್ಗ ಎಂದರೆ ಭಾಷೆ. ಕರ್ನಾಟಕದಲ್ಲಿರುವ  ಬಹಳ ಜನರಿಗೆ ಕನ್ನಡವು ಮಾತೃಭಾಷೆಯಾಗಿದೆ. ಕೆಲವು ರಾಜ್ಯಗಳಲ್ಲಿ ಕನ್ನಡ ಭಾಷೆಯನ್ನು  ಮಾತೃ ಭಾಷೆಯನ್ನಾಗಿ  ಬಳಸುವ ಜನರು ಕೂಡ ಇದ್ದಾರೆ.  ಭಾಷೆಯ ಪ್ರಾರಂಭಿಕ ರೂಪಗಳಲ್ಲಿ ಹಳೆಗನ್ನಡ, ನಡುಗನ್ನಡ , ಹಾಗು ನಂತರದ  ದಿನಗಳಲ್ಲಿ ಆಧುನಿಕ ಕನ್ನಡ ಆರಂಭವಾಯಿತು.ಆಧುನಿಕ ಭಾರತದಲ್ಲಿ ಪ್ರಚಲಿತವಾಗಿರುವ ಭಾಷೆಗಳಲ್ಲಿ ಕನ್ನಡ  ಅತಿ ಹಳೆಯ ಭಾಷೆಯಾಗಿದೆ ಎಂದು ಸುಳಿವುದೊರಕಿದೆ.  ದ್ರಾವಿಡ ಭಾಷೆಗಳ ಗುಂಪುಗಳಲ್ಲಿ ಕನ್ನಡವು ಒಂದು ಪ್ರಮುಖ ಭಾಷೆಯಾಗಿದೆ. ಭಾರತೀಯ ಭಾಷೆಗಳಿಗೆ  ಮೂಲ  ಲಿಪಿಯಾದ   ‘ಬ್ರಾಹ್ಮೀ’ ಲಿಪಿಯಿಂದ ಕನ್ನಡ ಭಾಷೆಯು ಲಿಖಿತ ರೂಪಗಳನ್ನೂ ಪಡೆದುಕೊಂಡಿದೆ.  ಕನ್ನಡ ಭಾಷೆಗೆ  ೧೫೦೦ ವರ್ಷಗಳ  ಹಿಂದಿನ  ಚರಿತ್ರೆ ಇದೆ ಎಂದು  ಹೇಳುತ್ತಾರೆ. ಕ್ರಿ,ಶ.  ೪೫೦ (450 ) ಕ್ಕೆ ಸೇರಿದ ಹಲ್ಮಿಡಿ ಶಾಸನದಲ್ಲಿ ಕನ್ನಡ ಲಿಪಿಯನ್ನು ನೋಡಬಹುದು. ಕನ್ನಡ , ತಮಿಳು ಹಾಗೂ ತೆಲಗು ಭಾಷೆಗಳು ದ್ರಾವಿಡ ಭಾಷಾ ಗುಂಪಿಗೆ  ಸೇರಿರುವುದರಿಂದ ಈ  ಮೂರು  ಭಾಷೆಗಳು ಒಂದೆ ರೀತಿಯ ರಚನೆಯನ್ನು  ಹೊಂದಿದೆ. ಪ್ರಾಚೀನ  ಸಾಹಿತ್ಯವನ್ನು ಹಳೆಗನ್ನಡದಲ್ಲಿ ನೋಡುತ್ತೇವೆ.  ಕ್ರಿ . ಶ  ಆರನೆಯ ಶತಮಾನದಿಂದ  ಕನ್ನಡದಲ್ಲಿ ಕೆಲವು  ರಾಜಾಜ್ಞೆಗಳನ್ನು ನೋಡಿದಾಗ  ಪ್ರಾಕೃತ  ಹಾಗು ಕನ್ನಡ ಭಾಷೆಗಳನ್ನು ಕರ್ನಾಟಕದ ಅರಸರು ಆಡಳಿತ ಉದ್ದೇಶಕ್ಕಾಗಿ ಕನ್ನಡವನ್ನು ಬಳಸುತ್ತಿದ್ದರು ಎಂದು ತಿಳಿದು ಬಂದಿದೆ. ವಿಜಯನಗರದ ಅರಸರು , ಮೈಸೂರಿನ  ಒಡೆಯರ್  ರವರು ಕನ್ನಡವನ್ನು ರಾಜ್ಯದ  ಏಕೈಕ ಭಾಷೆಯಾಗಿ ಬಳಸುತ್ತಿದ್ದರು. ಕರ್ನಾಟಕ ಸರ್ಕಾರವು ಕನ್ನಡವನ್ನು ಅಧಿಕೃತ  ಆಡಳಿತ  ಭಾಷೆಯನ್ನಾಗಿ ಮಾಡಿ ಅದನ್ನು  ಬಳಸಲು ಹಾಗೂ ಅನುಷ್ಟಾನಕ್ಕೆ ತರಲು ಹಲವಾರು  ಯೋಜನಾ ಕಾರ್ಯಗಳನ್ನು  ಜಾರಿಗೆ ತಂದಿದೆ. ಸಾಹಿತ್ಯ ಕೃತಿಗಳಲ್ಲಿ  ರಾಷ್ಟ್ರಕೂಟರ ರಾಜನಾದ ನೃಪತುಂಗನ ಆಸ್ಥಾನ  ಕವಿಯಾದ  ಶ್ರೀ ವಿಜಯನು  ರಚಿಸಿರುವ ‘ಕವಿರಾಜ ಮಾರ್ಗವು’ ಕನ್ನಡ ಸಾಹಿತ್ಯದಲ್ಲಿ ಲಭ್ಯವಿರುವ  ಪ್ರಥಮ ಕೃತಿಯಾಗಿದೆ. ಕನ್ನಡಲ್ಲಿ ಗದ್ಯ ಪದ್ಯಗಳನ್ನು ಬರೆದ ಗಂಗರಾಜನಾದ ದುರ್ವಿನೀತ , ನಾಗರ್ಜುನ ಮುಂತಾದ ಕವಿಗಳ ಹೆಸರುಗಳನ್ನು ಕವಿರಾಜ ಮಾರ್ಗ  ಕೃತಿಯಲ್ಲಿ ತಿಳಿಸುತ್ತದೆ.  ಕನ್ನಡ ಭಾಷೆಯ  ಮೂರು ವಿಧಗಳಾದ   ಹಳೆಗನ್ನಡ   , ನಡುಗನ್ನಡ ...

Read More
Scroll to Top